Atal Pension Yojana: ಪ್ರತಿದಿನ 7 ರೂ. ಉಳಿಸಿ, ತಿಂಗಳಿಗೆ 5000 ರೂ. ಪಡೆಯಿರಿ

Atal Pension Yojana : ನೀವು ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಈ ಯೋಜನೆಯಲ್ಲಿ, ವಯಸ್ಸಿಗೆ ಅನುಗುಣವಾಗಿ ಜನರು ಪಡೆಯುವ ಪಿಂಚಣಿಯ ಬಗ್ಗೆ ಹೇಳಲಾಗಿದೆ.

Written by - Yashaswini V | Last Updated : Aug 6, 2021, 01:25 PM IST
  • 2015 ರಲ್ಲಿ, ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಜನರಿಗಾಗಿ ಅಟಲ್ ಪಿಂಚಣಿ ಯೋಜನೆಯನ್ನು ಆರಂಭಿಸಲಾಯಿತು
  • 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು
  • ಈ ಯೋಜನೆಯಲ್ಲಿ ಹೂಡಿಕೆ ಮಾಡಲು ನಿಮಗೆ ವಿವಿಧ ಮೊತ್ತದ ಆಯ್ಕೆಗಳನ್ನು ನೀಡಲಾಗುತ್ತದೆ
Atal Pension Yojana: ಪ್ರತಿದಿನ 7 ರೂ. ಉಳಿಸಿ, ತಿಂಗಳಿಗೆ 5000 ರೂ. ಪಡೆಯಿರಿ title=
Atal Pension Yojana Benefits

Atal Pension Yojana : ನೀವು ನಿವೃತ್ತಿಯ ಹೂಡಿಕೆ ಯೋಜನೆ ಬಗ್ಗೆ ಯೋಚಿಸುತ್ತಿದ್ದರೆ ಅಟಲ್ ಪಿಂಚಣಿ ಯೋಜನೆ (Atal Pension Yojana) ನಿಮಗೆ ಉತ್ತಮ ಆಯ್ಕೆಯಾಗಿದೆ. ಸರ್ಕಾರ ನಡೆಸುತ್ತಿರುವ ಈ ಪಿಂಚಣಿ ಯೋಜನೆ  (Pension Yojana) ಅತ್ಯಂತ ಯಶಸ್ವಿ ಯೋಜನೆಯಾಗಿದೆ. ಈ ಯೋಜನೆಯನ್ನು ಪಿಂಚಣಿ ನಿಯಂತ್ರಕ ಪಿಎಫ್‌ಆರ್‌ಡಿಎ ನಿರ್ವಹಿಸುತ್ತದೆ. ಭಾರತ ಸರ್ಕಾರವು ಈ ಯೋಜನೆಯಲ್ಲಿ ಪಿಂಚಣಿಗೆ ಸಂಬಂಧಿಸಿದ ಎಲ್ಲಾ ಪ್ರಯೋಜನಗಳನ್ನು ಖಾತರಿಪಡಿಸುತ್ತದೆ. 2015 ರಲ್ಲಿ, ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಜನರಿಗಾಗಿ ಅಟಲ್ ಪಿಂಚಣಿ ಯೋಜನೆಯನ್ನು ಆರಂಭಿಸಲಾಯಿತು. 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಮತ್ತು ಪಿಂಚಣಿಯ ಲಾಭವನ್ನು ಪಡೆಯಬಹುದು.

ನೀವು ತಿಂಗಳಿಗೆ 5000 ರೂಪಾಯಿ ಪಿಂಚಣಿ ಪಡೆಯಲು ಬಯಸಿದರೆ, ನೀವು ಅಟಲ್ ಪಿಂಚಣಿ ಯೋಜನೆಯಲ್ಲಿ (Atal Pension Yojana) ಹೂಡಿಕೆ ಮಾಡಬಹುದು. 18 ವರ್ಷ ಮೇಲ್ಪಟ್ಟ ಮತ್ತು 40 ವರ್ಷದವರೆಗಿನ ಯಾರಾದರೂ ಈ ಯೋಜನೆಯನ್ನು ತೆಗೆದುಕೊಳ್ಳಬಹುದು. ಅಟಲ್ ಪಿಂಚಣಿ ಯೋಜನೆಯ  ಅತ್ಯಂತ ಮುಖ್ಯವಾದ ವಿಷಯವೆಂದರೆ ಎಪಿವೈ ಯೋಜನೆಗೆ, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಎಸ್‌ಬಿಐ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ಅಟಲ್ ಪಿಂಚಣಿ ಯೋಜನೆ (ಎಪಿವೈ) ಖಾತೆಗಳನ್ನು ತೆರೆಯುತ್ತಿವೆ.

ಇದನ್ನೂ ಓದಿ- Aadhaar- ವ್ಯಕ್ತಿಯ ಮರಣದ ನಂತರ ಆತನ ಆಧಾರ್ ಸಂಖ್ಯೆ ಏನಾಗುತ್ತೆ? ಸರ್ಕಾರ ಏನು ಮಾಡಲಿದೆ ಎಂದು ತಿಳಿಯಿರಿ

ನೀವು ಪ್ರತಿ ತಿಂಗಳು 5000 ರೂಪಾಯಿ ಪಿಂಚಣಿ ಪಡೆಯುತ್ತೀರಿ:
ನಿವೃತ್ತಿಯ ನಂತರದ ಯಾವುದೇ ತೊಂದರೆಯಿಲ್ಲದೆ ಸುರಕ್ಷಿತ ಜೀವನ ನಡೆಸಲು ಯೋಚಿಸುತ್ತಿರುವವರಿಗೆ, ಈ ಯೋಜನೆ ಸೂಕ್ತವಾಗಿದೆ. 18 ವರ್ಷದಿಂದ 40 ವರ್ಷದೊಳಗಿನ ಜನರು ಈ ಅಟಲ್ ಪಿಂಚಣಿ ಯೋಜನೆಯ ಲಾಭವನ್ನು (Atat Pension Yojana Benefits) ಪಡೆಯಬಹುದು. ಅಟಲ್ ಪಿಂಚಣಿ ಯೋಜನೆಯಲ್ಲಿ ಪ್ರತಿ ತಿಂಗಳು ಕನಿಷ್ಠ 1000 ರೂಪಾಯಿ ಮತ್ತು ಗರಿಷ್ಠ 5000 ರೂಪಾಯಿ ಪಿಂಚಣಿ ಲಭ್ಯವಿದೆ. ನಿಮಗೂ 18 ವರ್ಷವಾಗಿದ್ದರೆ ನೀವು ಈ ಯೋಜನೆಯ ಲಾಭವನ್ನು ಪಡೆಯಬಹುದು.

ಈ ಪ್ರಯೋಜನಗಳನ್ನು ಪಡೆಯಿರಿ:
ಈ ಯೋಜನೆಯಲ್ಲಿ ಹೂಡಿಕೆ ಮಾಡಲು ನಿಮಗೆ ವಿವಿಧ ಮೊತ್ತದ ಆಯ್ಕೆಗಳನ್ನು ನೀಡಲಾಗುತ್ತದೆ. ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ಎಷ್ಟು ಬೇಗನೆ ಹೂಡಿಕೆ ಆರಂಭಿಸುತ್ತೀರೋ ಅಷ್ಟು ಕಡಿಮೆ ನೀವು ಕೊಡುಗೆ ನೀಡಬೇಕಾಗುತ್ತದೆ. ನೀವು 18 ವರ್ಷಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ಮಾಸಿಕ 5000 ರೂ.ಗಳ ಪಿಂಚಣಿಗೆ, ನೀವು ಪ್ರತಿ ತಿಂಗಳು 210 ರೂ.ಗಳನ್ನು ಅಂದರೆ ದಿನಕ್ಕೆ 7 ರೂ.ಗಳನ್ನು ಠೇವಣಿ ಮಾಡಬೇಕು. ನೀವು 30 ನೇ ವರ್ಷದಲ್ಲಿ ಹೂಡಿಕೆ ಪ್ರಾರಂಭಿಸಿದರೆ, ಪ್ರತಿ ತಿಂಗಳು 577 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಮತ್ತು ನಿಮಗೆ 39 ವರ್ಷವಾಗಿದ್ದರೆ ನೀವು ಪ್ರತಿ ತಿಂಗಳು 1318 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ- Simple One Electric Scooter: ಆಗಸ್ಟ್ 15 ರಂದು 13 ರಾಜ್ಯಗಳಲ್ಲಿ ಬಿಡುಗಡೆಯಾಗಲಿದೆ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ವಿಶೇಷತೆ ಏನೆಂದು ತಿಳಿಯಿರಿ

ಅಟಲ್ ಪಿಂಚಣಿ ಯೋಜನೆಯಲ್ಲಿ (ಎಪಿವೈ), ಹೂಡಿಕೆದಾರರು ಇದ್ದಕ್ಕಿದ್ದಂತೆ ಮರಣ ಹೊಂದಿದರೆ ಅವರ ಹಣ ಮುಳುಗುವುದಿಲ್ಲ. ಆ ಹಣವನ್ನು ಅವರ ಕುಟುಂಬಕ್ಕೆ ನೀಡಲಾಗುತ್ತದೆ. ವ್ಯಕ್ತಿಯ ಸಾವಿನ ನಂತರ, ಅವರ ಪತ್ನಿ ಮತ್ತು ಪತ್ನಿಯ ಮರಣದ ನಂತರ ಅವರ ಮಕ್ಕಳಿಗೆ ಪಿಂಚಣಿ ನೀಡಲಾಗುವುದು. ಲಾಕ್‌ಡೌನ್‌ನಲ್ಲಿ ಜನರು ಈ ಯೋಜನೆಯ ಲಾಭವನ್ನು ಪಡೆಯುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News